ಜೂನ್ 12, 2024|ಅಪ್ಡೇಟ್ ಜುಲೈ 25, 2024
ರಷ್ಯಾ
ಅಪ್ಡೇಟ್—ಸಹೋದರನನ್ನ ಅಪರಾಧಿ ಅಂತ ತೀರ್ಪು ಕೊಡಲಾಗಿದೆ | “ಒಂದೇ ಟೀಂ ಆಗಿ ಯೆಹೋವನ ಸೇವೆ ಮಾಡಿದ್ವಿ”
ಓರಿಯೊಲ್ ನಗರದ ಸೋವಿಯೆಟ್ಸ್ಕಿ ಜಿಲ್ಲಾ ನ್ಯಾಯಾಲಯವು ಸಹೋದರ ಡಿಮಿಟ್ರಿ ಇಗ್ನಾಟೋವ್ ಅವರನ್ನು ಅಪರಾಧಿ ಎಂದು ಘೋಷಿಸಿ, ಸುಧಾರಣೆ ಕಾರಾಗೃಹದಲ್ಲಿ ಎರಡು ವರ್ಷ ಕಾರ್ಮಿಕನಾಗಿ ಅವರು ಹೇಳಿದ ಎಲ್ಲಾ ಕೆಲಸ ಮಾಡುವ ಶಿಕ್ಷೆ ವಿಧಿಸಿತು. ಅವರು ಈ ಜೈಲಲ್ಲೇ ವಾಸಮಾಡಬೇಕು ಹಾಗೂ ಸಮುದಾಯದಲ್ಲಿ ನೇಮಿಸುವ ಸ್ಥಳಗಳಲ್ಲಿ ಹೋಗಿ ಕೆಲಸ ಮಾಡಬೇಕಾಗುತ್ತೆ. ಈ ಶಿಕ್ಷೆಯ ಅವಧಿಯಲ್ಲಿ, ಅವರ 5% ಸಂಬಳವನ್ನ ಸರ್ಕಾರವು ತಗೆದುಕೊಳ್ಳುತ್ತೆ.
ವ್ಯಕ್ತಿಯ ಪರಿಚಯ
ಡಿಮಿಟ್ರಿ ಹಾಗೂ ಡಾರಿಯಾ ಅವರ ಈ ಅನುಭವದಿಂದ ‘ಸ್ವರ್ಗದ ವಿಷ್ಯಗಳ ಮೇಲೆ ಮನಸ್ಸಿಟ್ರೆ’ ಕಷ್ಟಪರೀಕ್ಷೆಗಳು ಬಂದ್ರೂ ನಂಬಿಕೆಯನ್ನ ಬಲಪಡಿಸಿಕೊಳ್ತಾ, ಯೆಹೋವ ದೇವರ ಜೊತೆ ಇರೋ ಸಂಬಂಧನ ಕಾಪಾಡಿಕೊಳ್ಳಬಹುದು ಅಂತ ಗೊತ್ತಾಗುತ್ತೆ.—ಕೊಲೊಸ್ಸೆ 3:2.
ಕಾಲ ರೇಖೆ
ಡಿಸೆಂಬರ್ 9, 2020
ಏನಾದರೂ ಸಿಗುತ್ತಾ ಅಂತ ಅವರ ಮನೆಯಲ್ಲಿ ಹುಡುಕಿದರು
ಅಕ್ಟೋಬರ್ 28, 2021
ಕ್ರಿಮಿನಲ್ ಕೇಸ್ ದಾಖಲಾಯಿತು
ಸೆಪ್ಟೆಂಬರ್ 13, 2023
ಅವರ ಮನೆಯಲ್ಲಿ ಎರಡನೇ ಸಾರಿ ಹುಡುಕಾಡಿದರು
ಮಾರ್ಚ್ 4, 2024
ಕ್ರಿಮಿನಲ್ ಕೇಸಿನ ವಿಚಾರಣೆ ಆರಂಭವಾಯಿತು