ಸುರಕ್ಷತಾ ಅಧಿಕಾರಿಯಿಂದ ಯೆಹೋವನ ಸಾಕ್ಷಿಗಳಿಗೆ ಶ್ಲಾಘನೆ
ಆಸ್ಟ್ರೇಲಿಯದ ಸಿಡ್ನಿಯಲ್ಲಿ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವೊಂದರ ನಿರ್ಮಾಣಕಾರ್ಯ ನಡೆಯುತ್ತಿತ್ತು. ಆ ಸ್ಥಳಕ್ಕೆ ಭೇಟಿ ನೀಡಿದ ಸರಕಾರಿ ಅಧಿಕಾರಿಯೊಬ್ಬರು ಹೀಗೆ ಹೇಳಿದರು: “ಇದರಷ್ಟು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವ ನಿರ್ಮಾಣಕಾರ್ಯವನ್ನು ನಾನು ಇಲ್ಲಿಯವರೆಗೂ ನೋಡಿಲ್ಲ.”
ಆ ಅಧಿಕಾರಿ ಹೀಗೆ ಬರೆದರು: “ಆ ಜಾಗದಲ್ಲಿ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ... ಎಲ್ಲವನ್ನೂ ನೀಟಾಗಿ, ಕೈಗೆ ಎಟುಕುವ ರೀತಿಯಲ್ಲಿ ಇಡಲಾಗಿತ್ತು. ಅಪಘಾತ ಸಂಭವಿಸಿದರೆ ಸುಲಭವಾಗಿ ಹೊರಗೆ ಬರುವ ರೀತಿಯಲ್ಲೂ ಇತ್ತು. ಕರೆಂಟ್‌ಗೆ ಸಂಬಂಧಿಸಿದ ಎಲ್ಲವನ್ನೂ ನೆಲದಿಂದ ಎತ್ತರದಲ್ಲಿ ಪ್ಲಾಸ್ಟಿಕ್ ಹುಕ್‌ಗಳ ಮೂಲಕ ಭದ್ರವಾಗಿ ಇಡಲಾಗಿತ್ತು. ಬೆಂಕಿಯನ್ನು ನಂದಿಸಲು ಅಗ್ನಿಶಾಮಕಗಳಿದ್ದವು ... ಕಾಮಗಾರಿಯಲ್ಲಿ ತೊಡಗಿರುವವರು ಸಹ ಉದ್ದವಾದ ಪ್ಯಾಂಟ್ ಶರ್ಟ್‌ಗಳನ್ನು, ಭದ್ರವಾದ ಟೋಪಿಗಳನ್ನು, ಸುರಕ್ಷಿತ ಕನ್ನಡಕಗಳನ್ನು ಧರಿಸಿದ್ದರು . . . ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದರು.”
ಸೈಟ್ ಮ್ಯಾನೆಜರ್ ವಿಕ್ಟರ್ ಆಟರ್ ಹೀಗಂದರು: “ಯೆಹೋವನ ಸಾಕ್ಷಿಗಳು ಸುರಕ್ಷತೆಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ . . . ನಾವು ಭದ್ರವಾಗಿ ಕೆಲಸ ಮಾಡಿದಾಗಲೇ ಜೀವವನ್ನು ದೇವರು ನೋಡುವಂಥ ರೀತಿಯಲ್ಲಿ ಅಂದರೆ ಗೌರವಪೂರ್ವಕವಾಗಿ ನೋಡಲು ಆಗುತ್ತದೆ. ಅಷ್ಟೇ ಅಲ್ಲದೆ ಸಂತೋಷವಾಗಿ ಕೆಲಸಮಾಡಲು ಆಗುತ್ತದೆ. ಪ್ರತಿದಿನ ಕಷ್ಟಪಟ್ಟು ಕೆಲಸಮಾಡಿ ಮನೆಗೆ ಹೋಗುವಾಗ ನನ್ನ ಮುಖದ ಮೇಲೆ ಯಾವಾಗಲೂ ನಗು ಇರುತ್ತದೆ.”
127 ಜನರಿಗೆ ಆಸನ ವ್ಯವಸ್ಥೆ ಇರುವ ಈ ಸಭಾಗೃಹ ಏಪ್ರಿಲ್ 2012ರಲ್ಲಿ ಪೂರ್ಣಗೊಂಡಿತು.