ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ಏನಂತ ತಿಳಿದುಕೊಳ್ಳಿ

ನಿಜ ಏನಂತ ತಿಳಿದುಕೊಳ್ಳಿ

ಯಾಕೆ ಪ್ರಾಮುಖ್ಯ?

ತುಂಬ ಜನ ಅವರು ಇವರು ಹೇಳಿದ್ದೇ ನಿಜ ಅನ್ಕೊಂಡಿರುತ್ತಾರೆ. ಅವ್ರಿಗೆ ಪೂರ್ತಿ ವಿಷಯ ಗೊತ್ತಿರಲ್ಲ. ಆಗ ಭೇದಭಾವ ಮಾಡ್ತಾರೆ. ಕೆಲವು ಉದಾಹರಣೆಗಳನ್ನ ನೋಡಿ:

  • ಮಿಷಿನ್‌, ಕಂಪ್ಯೂಟರ್‌ಗಳಲ್ಲಿ ಹೆಂಗಸರಿಗೆ ಕೆಲಸ ಮಾಡೋಕೆ ಆಗಲ್ಲ ಅಂತ ತುಂಬ ಜನ ಅನ್ಕೊಂಡಿದ್ದಾರೆ. ಹಾಗಾಗಿ ಅವರಿಗೆ ಕೆಲಸನೇ ಕೊಡಲ್ಲ.

  • ‘ನಮಗಿಂತ ಕೆಳಗಿನ ಜಾತಿಯವರನ್ನ ಮದುವೆಯಾದ್ರೆ ನಾವು ಮಲೀನರಾಗ್ತೀವಿ ಅಥವಾ ಅಶುದ್ಧರಾಗ್ತೀವಿ’ ಅನ್ನೋ ತಪ್ಪಭಿಪ್ರಾಯ ತುಂಬ ಜನರಿಗೆ ಇದೆ.

  • ಅಂಧರು, ಕುಂಟರು ಯಾವಾಗಲು ದುಃಖದಲ್ಲೇ ಇರ್ತಾರೆ ಅಂತ ಕೆಲವರು ತಪ್ಪು ತಿಳ್ಕೊಂಡಿದ್ದಾರೆ.

ಇಂಥ ಕಟ್ಟು ಕಥೆಗಳನ್ನ ನಂಬೋರು ತಾವು ಹೇಳಿದ್ದೇ ಸರಿ ಅಂತ ನಿರೂಪಿಸೋಕೆ ಏನು ಬೇಕಾದ್ರು ಹೇಳ್ತಾರೆ. ಅಷ್ಟೇ ಅಲ್ಲ ತಾವು ಹೇಳಿದ್ದನ್ನ ಒಪ್ಪದೇ ಇರೋರಿಗೆ ಲೋಕದ ಜ್ಞಾನ ಇಲ್ಲ ಅಂತ ಅಂದುಕೊಳ್ತಾರೆ.

ಪವಿತ್ರ ಗ್ರಂಥದಲ್ಲಿರೋ ಸಲಹೆ

“ವಿವೇಕಿಯ ಹೃದಯ ತಿಳುವಳಿಕೆಯನ್ನು ಹುಡುಕುವದು.”—ಜ್ಞಾನೋಕ್ತಿ 15:14.

ಈ ಸಲಹೆಯಿಂದ ನಾವೇನು ಕಲಿಬಹುದು? ನಿಜ ಏನಂತ ತಿಳುಕೊಳ್ಳದೆ ಬರೀ ಅವರು ಇವರು ಹೇಳಿದ್ದನ್ನೇ ನಂಬುತ್ತಿದ್ರೆ ಬೇರೆಯವರ ಮೇಲೆ ತಪ್ಪಭಿಪ್ರಾಯ ಬೆಳೆಯೋ ಸಾಧ್ಯತೆ ಇದೆ.

ನಿಜ ಏನಂತ ತಿಳುಕೊಂಡ್ರೆ ಸಿಗೋ ಪ್ರಯೋಜ್ನ

ನಿಜ ಏನಂತ ತಿಳುಕೊಂಡ್ರೆ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪಿನ ಬಗ್ಗೆ ಅಂತೆ-ಕಂತೆ ಮಾತುಗಳನ್ನ ಕೇಳಿಸ್ಕೊಂಡ ತಕ್ಷಣ ಅದನ್ನ ನಂಬಲ್ಲ. ಅಷ್ಟೇ ಅಲ್ಲ ಯಾರ ಬಗ್ಗೆನಾದ್ರು ತಪ್ಪಭಿಪ್ರಾಯ ಇದ್ರೆ ಅದನ್ನ ನಮ್ಮ ಮನಸ್ಸಿಂದ ತೆಗೆದು ಹಾಕೋಕೂ ಸಾಧ್ಯ ಆಗುತ್ತೆ.

ನೀವೇನು ಮಾಡಬಹುದು?

  • ಒಂದು ಗುಂಪಿನ ಬಗ್ಗೆ ಕೆಟ್ಟದ್ದೇನಾದ್ರು ಕೇಳಿದ್ರೆ ಆ ಗುಂಪಲ್ಲಿರೋ ಎಲ್ಲಾ ವ್ಯಕ್ತಿಗಳು ಕೆಟ್ಟೋರಲ್ಲ ಅಂತ ನೆನಪಲ್ಲಿಡಿ.

  • ಬೇರೆಯವರ ಬಗ್ಗೆ ಎಲ್ಲಾ ವಿಷ್ಯನು ನಮಗೆ ಗೊತ್ತಿರಲ್ಲ ಅನ್ನೋದನ್ನ ಅರ್ಥಮಾಡ್ಕೊಳ್ಳಿ.

  • ನಂಬಬಹುದಾದ ಮೂಲಗಳಿಂದ ನಿಜ ಏನು ಅಂತ ತಿಳುಕೊಳ್ಳಿ.