ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಭಾಗವಹಿಸುವುದಿಲ್ಲವೇಕೆ?
ನಮ್ಮ ಓದುಗರ ಪ್ರಶ್ನೆ
ಯೆಹೋವನ ಸಾಕ್ಷಿಗಳು ಯುದ್ಧದಲ್ಲಿ ಭಾಗವಹಿಸುವುದಿಲ್ಲವೇಕೆ?
ಯೆಹೋವನ ಸಾಕ್ಷಿಗಳು ಎಲ್ಲಿಯೇ ಜೀವಿಸುತ್ತಿರಲಿ, ರಾಷ್ಟ್ರ ರಾಷ್ಟ್ರಗಳ ಮಧ್ಯೆ ಅಥವಾ ತಮ್ಮ ರಾಷ್ಟ್ರದೊಳಗೇ ನಡೆಯುವ ಯುದ್ಧಗಳಲ್ಲಿ ಭಾಗವಹಿಸುವುದಿಲ್ಲ ಎಂಬ ವಿಷಯದಲ್ಲಿ ದೀರ್ಘ ಇತಿಹಾಸವಿದೆ. “ಯೆಹೋವನ ಸಾಕ್ಷಿಗಳು ಯುದ್ಧದ ಸಮಯದಲ್ಲಿ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಪಾಲಿಸುತ್ತಾರೆ,” ಎಂದಿತು ಆಸ್ಟ್ರೇಲಿಯನ್ ಎನ್‌ಸೈಕ್ಲಪೀಡೀಯ, 50 ವರುಷಗಳ ಹಿಂದೆ.
ಸಾಕ್ಷಿಗಳು ಅಂಥ ಯುದ್ಧಗಳಲ್ಲಿ ಭಾಗವಹಿಸದೆ ಇರುವ ಒಂದು ಮುಖ್ಯ ಕಾರಣವು ಅದು ಅವರ ಕ್ರೈಸ್ತ ಮನಸ್ಸಾಕ್ಷಿಗೆ ವಿರೋಧವಾಗಿರುವುದರಿಂದಲೇ. ಅವರ ಮನಸ್ಸಾಕ್ಷಿ ಕರ್ತನಾದ ಯೇಸು ಕ್ರಿಸ್ತನ ಆಜ್ಞೆಗಳಿಂದ ಮತ್ತು ಅವನ ಮಾದರಿಯಿಂದ ತರಬೇತಿಹೊಂದಿರುತ್ತದೆ. ತಮ್ಮ ನೆರೆಯವರನ್ನು ಪ್ರೀತಿಸಬೇಕೆಂದು ಯೇಸು ತನ್ನ ಹಿಂಬಾಲಕರನ್ನು ನಿರ್ದೇಶಿಸಿದನು. ಅವನು ಹೀಗೂ ಆಜ್ಞಾಪಿಸಿದನು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ.” (ಲೂಕ 6:27; ಮತ್ತಾಯ 22:39) ಒಮ್ಮೆ ಅವನ ಶಿಷ್ಯರಲ್ಲೊಬ್ಬನು ಕತ್ತಿ ಹಿಡಿದು ಯೇಸುವನ್ನು ಅಪಾಯದಿಂದ ಕಾಪಾಡಲು ಪ್ರಯತ್ನಿಸಿದಾಗ ಯೇಸು ಅವನಿಗೆ, “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು” ಎಂದು ಹೇಳಿದನು. (ಮತ್ತಾಯ 26:52) ಹೀಗೆ ತನ್ನ ನುಡಿ ಮತ್ತು ಮಾದರಿಯಿಂದ ತನ್ನ ಹಿಂಬಾಲಕರು ಯುದ್ಧಾಸ್ತ್ರಗಳನ್ನು ಬಳಸಬಾರದೆಂದು ಆತನು ಸ್ಪಷ್ಟವಾಗಿ ತೋರಿಸಿದನು.
ಯೆಹೋವನ ಸಾಕ್ಷಿಗಳು ಯುದ್ಧ ಮಾಡದಿರುವ ಇನ್ನೊಂದು ಕಾರಣವು, ಅವರು ಲೋಕವ್ಯಾಪಕವಾದ ಒಂದು ಧಾರ್ಮಿಕ ಗುಂಪಿನ ಸದಸ್ಯರಾಗಿರುವುದೇ. ಯುದ್ಧವು, ಸಹೋದರನ ವಿರುದ್ಧ ಸಹೋದರನು ಹೋರಾಡುವಂತೆ ಮಾಡುತ್ತದೆ ಮತ್ತು “ಒಬ್ಬರ ಮೇಲೊಬ್ಬರಿಗೆ ಪ್ರೀತಿ” ಇರಬೇಕೆಂಬ ಯೇಸುವಿನ ಆಜ್ಞೆಗೆ ಇದು ವಿರುದ್ಧವಾಗಿದೆ.—ಯೋಹಾನ 13:35.
ಪ್ರೀತಿಗೆ ಆಧಾರವಾಗಿರುವ ಮೇಲಿನ ಮೂಲತತ್ತ್ವಗಳು ಯೆಹೋವನ ಸಾಕ್ಷಿಗಳಿಗೆ ಬರೇ ಒಂದು ಸಿದ್ಧಾಂತವಲ್ಲ, ಬದಲಾಗಿ ಅವರು ಅದನ್ನು ತಮ್ಮ ಜೀವನದಲ್ಲಿ ಅನ್ವಯಿಸುತ್ತಾರೆ. ದೃಷ್ಟಾಂತಕ್ಕಾಗಿ, 1939-1945ರ ವರೆಗೆ ನಡೆದ ಎರಡನೆಯ ಲೋಕಯುದ್ಧದ ಸಮಯದಲ್ಲಿ ಅವರು ಆಯ್ದುಕೊಂಡ ನಿಲುವನ್ನು ಪರೀಕ್ಷಿಸಿರಿ. ಅಮೆರಿಕದಲ್ಲಿ, 4,300ಕ್ಕೂ ಹೆಚ್ಚು ಮಂದಿ ಯೆಹೋವನ ಸಾಕ್ಷಿಗಳು ಯುದ್ಧಮಾಡಲು ನಿರಾಕರಿಸಿದ್ದರಿಂದ ಫೆಡರಲ್ ಸೆರೆಮನೆಗಳಲ್ಲಿ ಹಾಕಲ್ಪಟ್ಟರು. ಬ್ರಿಟನಿನಲ್ಲಿ ಯುದ್ಧ ಕರ್ತವ್ಯಗಳನ್ನು ಮಾಡಲು ನಿರಾಕರಿಸಿದ್ದಕ್ಕಾಗಿ 1500ಕ್ಕೂ ಹೆಚ್ಚು ಮಂದಿ ಬಂದಿಗಳಾದರು, ಅವರಲ್ಲಿ 300ಕ್ಕೂ ಹೆಚ್ಚು ಮಹಿಳೆಯರಿದ್ದರು. ನಾಸಿ ಜರ್ಮನಿಯಲ್ಲಿ, 270ಕ್ಕೂ ಹೆಚ್ಚು ಮಂದಿ ಯೆಹೋವನ ಸಾಕ್ಷಿಗಳು ಶಸ್ತ್ರಗಳನ್ನೆತ್ತಲು ನಿರಾಕರಿಸಿದ್ದಕ್ಕಾಗಿ ಸರಕಾರದ ಆಜ್ಞೆಯಿಂದ ಕೊಲ್ಲಲ್ಪಟ್ಟರು. ನಾಸಿ ಪ್ರಭುತ್ವದ ಸಮಯದಲ್ಲಿ, 10,000ಕ್ಕೂ ಹೆಚ್ಚು ಮಂದಿ ಸಾಕ್ಷಿಗಳು ಒಂದೊ ಸೆರೆಮನೆಯಲ್ಲಿ ಇಲ್ಲವೆ ಕೂಟಶಿಬಿರಗಳಲ್ಲಿ ಬಂಧಿಗಳಾದರು. ಜಪಾನಿನ ಸಾಕ್ಷಿಗಳು ಸಹ ಭೀಕರವಾಗಿ ಕಷ್ಟವನ್ನು ಅನುಭವಿಸಿದರು. ಎರಡನೆಯ ಲೋಕಯುದ್ಧದ ರಣರಂಗಗಳಲ್ಲಿ ಮತ್ತು ನಂತರದ ಯುದ್ಧಗಳಲ್ಲಿ ತಮ್ಮ ಪ್ರಿಯರನ್ನು ಕಳೆದುಕೊಂಡವರು, ಅಂಥ ಮರಣಕ್ಕೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೂ ಹೊಣೆಯಲ್ಲ ಎಂಬ ವಿಷಯದಲ್ಲಿ ಖಾತರಿಯಿಂದಿರಬಲ್ಲರು.
ಯುದ್ಧದ ವಿಷಯದಲ್ಲಿ ಯೆಹೋವನ ಸಾಕ್ಷಿಗಳ ನೋಟವೇನು ಎಂಬದನ್ನು ವೂಲ್ಫ್‌ಗ್ಯಾಂಗ್ ಕುಸ್‌ರೋ ಎಂಬ ಸಾಕ್ಷಿಯ ಕೊನೆಯ ಮಾತುಗಳು ಉತ್ತಮವಾಗಿ ವ್ಯಕ್ತಪಡಿಸುತ್ತವೆ. ಈ 20 ವಯಸ್ಸಿನ ಜರ್ಮನ್ ನಿವಾಸಿಯು ಯುದ್ಧದಲ್ಲಿ ಭಾಗವಹಿಸದ ಕಾರಣ 1942ರಲ್ಲಿ ಯೆಶಾಯ 2:4) ಅವನು ಮಿಲಿಟರಿ ಕೋರ್ಟಿನಲ್ಲಿ ಹೀಗೆಂದನು: “ದೇವರ ವಾಕ್ಯವಾದ ಬೈಬಲಿಗನುಸಾರ ನಾನು ಒಬ್ಬ ಯೆಹೋವನ ಸಾಕ್ಷಿಯಾಗಿ ಬೆಳೆಸಲ್ಪಟ್ಟೆ. ಆತನು ಮನುಷ್ಯರಿಗೆ ಕೊಟ್ಟ ಅತಿ ಮಹತ್ತ್ವವಾದ ಮತ್ತು ಅತಿ ಪವಿತ್ರವಾದ ಆಜ್ಞೆಯು, ‘ನೀನು ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರನ್ನು ಪ್ರೀತಿಸಬೇಕು ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ. ಇನ್ನೊಂದು ಆಜ್ಞೆ ‘ನರಹತ್ಯ ಮಾಡಬಾರದು’ ಎನ್ನುತ್ತದೆ. ನಮ್ಮ ಸೃಷ್ಟಿಕರ್ತನು ಈ ಆಜ್ಞೆಯನ್ನು ಕೊಟ್ಟದ್ದು ನಮಗೋ ಮರಗಳಿಗೊ?”
ನಾಸಿಗಳು ಅವನ ಶಿರಚ್ಛೇದನ ಮಾಡಿದರು. (—ಮಾರ್ಕ 12:29-31; ವಿಮೋಚನಕಾಂಡ 20:13.
ಸರ್ವಶಕ್ತನಾದ ಯೆಹೋವ ದೇವರು ಮಾತ್ರ ಭೂಮಿಗೆ ಚಿರಸ್ಥಾಯಿಯಾದ ಶಾಂತಿಯನ್ನು ತರುವನೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಆತನು ‘ಲೋಕದ ಎಲ್ಲ ಭಾಗದಲ್ಲೂ ಯುದ್ಧಗಳನ್ನು ನಿಲ್ಲಿಸಿಬಿಡುವ’ ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕಾಗಿ ಅವರು ಆತನಲ್ಲೇ ಭರವಸೆಯಿಡುತ್ತಾರೆ.—ಕೀರ್ತನೆ 46:9. (w08 7/1)