ಕೀರ್ತನೆ 36:1-12
ಗಾಯಕರ ನಿರ್ದೇಶಕನಿಗೆ ಸೂಚನೆ: ಯೆಹೋವನ ಸೇವಕ ದಾವೀದನ ಕೀರ್ತನೆ.
36 ಕೆಟ್ಟವನ ಹೃದಯದಲ್ಲಿ ಅಪರಾಧ ಅವನ ಜೊತೆ ಮಾತಾಡುತ್ತೆ,ಅವನ ಕಣ್ಣಲ್ಲಿ ದೇವರ ಭಯ ಸ್ವಲ್ಪನೂ ಇಲ್ಲ.+
2 ಅವನು ತನ್ನ ಬಗ್ಗೆನೇ ಕೊಚ್ಕೊಳ್ತಾನೆ ಅಂದ್ರೆ,ಅವನಿಗೆ ಅವನ ತಪ್ಪು ಕಾಣೋದೇ ಇಲ್ಲ, ಅದನ್ನ ಅವನು ದ್ವೇಷಿಸೋದೇ ಇಲ್ಲ.+
3 ಅವನ ಬಾಯಲ್ಲಿ ಬರೋ ಮಾತು ಹಾನಿಕರ, ಮೋಸಕರ,ಒಳ್ಳೇದನ್ನ ಮಾಡೋಕೆ ಅವನಲ್ಲಿ ಸ್ವಲ್ಪನೂ ಬುದ್ಧಿ ಇಲ್ಲ.
4 ಹಾಸಿಗೆ ಮೇಲೆ ಇರೋವಾಗ್ಲೂ ಅವನು ಸಂಚು ಮಾಡ್ತಾನೆ.
ಅವನು ಹೋಗ್ತಿರೋ ದಾರಿ ಒಳ್ಳೇದಲ್ಲ,ಅವನು ಕೆಟ್ಟದ್ದನ್ನ ಬಿಡೋದೇ ಇಲ್ಲ.
5 ಯೆಹೋವನೇ, ನಿನ್ನ ಶಾಶ್ವತ ಪ್ರೀತಿ ಆಕಾಶವನ್ನ,+ನಿನ್ನ ನಂಬಿಗಸ್ತಿಕೆ ಮೋಡಗಳನ್ನ ಮುಟ್ಟುತ್ತೆ.
6 ನಿನ್ನ ನೀತಿ ವೈಭವದಿಂದ ತುಂಬಿರೋ ಬೆಟ್ಟದ ತರ ಇದೆ,*+ನಿನ್ನ ತೀರ್ಪುಗಳು ವಿಶಾಲವಾದ ಆಳ ಸಾಗರದ ತರ ಇದೆ.+
ಯೆಹೋವನೇ, ನೀನು ಮನುಷ್ಯನನ್ನೂ ಮೃಗಗಳನ್ನೂ ಕಾಪಾಡ್ತೀಯ.+
7 ದೇವರೇ, ನಿನ್ನ ಶಾಶ್ವತ ಪ್ರೀತಿ ಎಷ್ಟೋ ಅಮೂಲ್ಯ!+
ನಿನ್ನ ರೆಕ್ಕೆಯ ನೆರಳಲ್ಲಿ, ಮನುಷ್ಯರು ಆಶ್ರಯ ಪಡ್ಕೊತಾರೆ.+
8 ಅವರು ನಿನ್ನ ಆಲಯದಲ್ಲಿರೋ ಒಳ್ಳೇದನ್ನ* ತೃಪ್ತಿಯಾಗೋ ತನಕ ಕುಡಿತಾರೆ.+
ನೀನು ನಿನ್ನ ಒಳ್ಳೇತನದ ನದಿಯ ನೀರನ್ನ ಅವರಿಗೆ ಕುಡಿಸ್ತೀಯ.+
9 ಜೀವದ ಮೂಲ* ನೀನೇ,+ನಿನ್ನ ಬೆಳಕಿಂದಾನೇ ನಾವು ಬೆಳಕನ್ನ ನೋಡ್ತೀವಿ.+
10 ನಿನ್ನ ಬಗ್ಗೆ ತಿಳ್ಕೊಂಡಿರೋರಿಗೆ ನಿನ್ನ ಶಾಶ್ವತ ಪ್ರೀತಿಯನ್ನ,+ಪ್ರಾಮಾಣಿಕ ಹೃದಯದವರಿಗೆ ನಿನ್ನ ನೀತಿಯನ್ನ ತೋರಿಸ್ತಾ ಇರು.+
11 ದುರಹಂಕಾರಿಯ ಕಾಲು ನನ್ನನ್ನ ತುಳಿಯೋಕೆ ಬಿಡಬೇಡ,ಕೆಟ್ಟವನ ಕೈ ನನ್ನನ್ನ ಓಡಿಸದ ಹಾಗೆ ನೋಡ್ಕೊ.
12 ನೋಡು! ಅಪರಾಧಿಗಳು ಬಿದ್ದುಹೋಗಿದ್ದಾರೆ,ಅವರಿಗೆ ಮೇಲೆ ಎದ್ದೇಳೋಕೆ ಆಗಲ್ಲ.+