ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾನಿಯೇಲ ಪುಸ್ತಕ

ಅಧ್ಯಾಯಗಳು

1 2 3 4 5 6 7 8 9 10 11 12

ಸಾರಾಂಶ

  • 1

    • ಬಾಬೆಲಿನ ಜನ್ರು ಯೆರೂಸಲೇಮನ್ನ ವಶ ಮಾಡ್ಕೊಂಡ್ರು (1, 2)

    • ಕೈದಿಗಳಾಗಿ ಕರ್ಕೊಂಡು ಬಂದಿದ್ದ ರಾಜವಂಶದ ಯುವಕರಿಗೆ ವಿಶೇಷ ತರಬೇತಿ (3-5)

    • ನಾಲ್ಕು ಇಬ್ರಿಯರ ನಂಬಿಕೆ ಪರೀಕ್ಷೆ (6-21)

  • 2

    • ರಾಜ ನೆಬೂಕದ್ನೆಚ್ಚರನನ್ನ ನಿದ್ದೆ ಕೆಡಿಸಿದ ಕನಸು (1-4)

    • ಯಾವ ವಿವೇಕಿಗೂ ಆ ಕನಸಿನ ಅರ್ಥ ಹೇಳಕ್ಕಾಗಿಲ್ಲ (5-13)

    • ಸಹಾಯಕ್ಕಾಗಿ ದಾನಿಯೇಲ ದೇವರಲ್ಲಿ ಪ್ರಾರ್ಥಿಸಿದ (14-18)

    • ಗುಟ್ಟು ತಿಳಿಸಿದ್ದಕ್ಕೆ ದೇವರಿಗೆ ಧನ್ಯ​ವಾದ (19-23)

    • ದಾನಿಯೇಲ ರಾಜನಿಗೆ ಕನಸು ಹೇಳಿದ (24-35)

    • ಕನಸಿನ ಅರ್ಥ (36-45)

      • ದೇವರ ಸರ್ಕಾರ ಅನ್ನೋ ಬಂಡೆ ಮೂರ್ತಿ​ಯನ್ನ ಚೂರುಚೂರು ಮಾಡಿತು (44, 45)

    • ರಾಜ ದಾನಿಯೇಲನನ್ನ ಸನ್ಮಾನಿಸಿದ (46-49)

  • 3

    • ರಾಜ ನೆಬೂಕದ್ನೆಚ್ಚರನ ಚಿನ್ನದ ಮೂರ್ತಿ (1-7)

      • ಆ ಮೂರ್ತಿಯನ್ನ ಆರಾಧಿಸೋಕೆ ಒತ್ತಾಯ (4-6)

    • ಮೂವರು ಇಬ್ರಿಯರು ವಿಧೇಯತೆ ತೋರಿಸ್ತಿಲ್ಲ ಅನ್ನೋ ಆರೋಪ (8-18)

      • “ನಾವು ನಿನ್ನ ದೇವರುಗಳನ್ನ ಆರಾಧಿಸಲ್ಲ” (18)

    • ಬೆಂಕಿ ಕುಲುಮೆಗೆ ಅವ್ರನ್ನ ಎಸೆದ್ರು (19-23)

    • ಬೆಂಕಿಯಿಂದ ಅದ್ಭುತವಾಗಿ ಪಾರಾದ್ರು (24-27)

    • ರಾಜ ಇಬ್ರಿಯರ ದೇವರನ್ನ ಗೌರವಿಸಿದ (28-30)

  • 4

    • ರಾಜ ನೆಬೂಕದ್ನೆಚ್ಚರ ದೇವರ ರಾಜಾಧಿಕಾರ ಒಪ್ಕೊಂಡ (1-3)

    • ಒಂದು ಮರದ ಬಗ್ಗೆ ರಾಜನ ಕನಸು (4-18)

      • ಮರ ಬಿದ್ದ ಮೇಲೆ ಏಳು ಕಾಲ ಕಳೀಬೇಕು (16)

      • ಮನುಷ್ಯರ ಸಾಮ್ರಾಜ್ಯದ ಮೇಲೆ ದೇವರೇ ಅಧಿಕಾರಿ (17)

    • ದಾನಿಯೇಲ ಕನಸಿನ ಅರ್ಥ ಹೇಳಿದ (19-27)

    • ಆ ಕನಸು ಮೊದ್ಲು ರಾಜನಲ್ಲಿ ನಿಜ ಆಯ್ತು (28-36)

      • ರಾಜನಿಗೆ ಏಳು ಕಾಲ ತನಕ ಹುಚ್ಚು ಹಿಡಿತು (32, 33)

    • ಸ್ವರ್ಗದ ದೇವರನ್ನ ರಾಜ ಗೌರವಿಸಿದ (37)

  • 5

    • ರಾಜ ಬೇಲ್ಶಚ್ಚರ ಮಾಡಿದ ಔತಣ (1-4)

    • ಗೋಡೆ ಮೇಲಿನ ಬರಹ (5-12)

    • ಆ ಬರಹದ ಅರ್ಥ ಹೇಳೋಕೆ ದಾನಿಯೇಲನನ್ನ ಕೇಳ್ಕೊಂಡ (13-25)

    • ಅರ್ಥ: ಬಾಬೆಲಿನ ನಾಶನ (26-31)

  • 6

    • ಪರ್ಶಿಯದ ಅಧಿಕಾರಿಗಳು ದಾನಿಯೇಲನ ವಿರುದ್ಧ ಮಾಡಿದ ಸಂಚು (1-9)

    • ದಾನಿಯೇಲ ಪ್ರಾರ್ಥನೆ ಮಾಡೋದನ್ನ ಮುಂದುವರಿಸಿದ (10-15)

    • ದಾನಿಯೇಲನನ್ನ ಸಿಂಹದ ಗುಂಡಿಗೆ ಎಸೆದ್ರು (16-24)

    • ರಾಜ ದಾರ್ಯಾವೆಷ ದಾನಿಯೇಲನ ದೇವರನ್ನ ಕೊಂಡಾಡಿದ (25-28)

  • 7

    • ನಾಲ್ಕು ಪ್ರಾಣಿಗಳ ಬಗ್ಗೆ ದರ್ಶನ (1-8)

      • ಸೊಕ್ಕಿನ ಚಿಕ್ಕ ಕೊಂಬು ಹೊರಬಂತು (8)

    • ಮಹಾ ವೃದ್ಧನ ನ್ಯಾಯಸಭೆ (9-14)

      • ಮನುಷ್ಯಕುಮಾರನನ್ನ ರಾಜನಾಗಿ ಮಾಡಲಾಯ್ತು (13, 14)

    • ದಾನಿಯೇಲನಿಗೆ ಅದ್ರ ಅರ್ಥ ತಿಳಿಸಲಾಯ್ತು (15-28)

      • ಆ ನಾಲ್ಕು ಪ್ರಾಣಿಗಳು ನಾಲ್ಕು ರಾಜರಾಗಿದ್ದಾರೆ (17)

      • ಪವಿತ್ರ ಜನ್ರಿಗೆ ಆ ಸಾಮ್ರಾಜ್ಯ ಕೊಡಲಾಗುತ್ತೆ (18)

      • ಹತ್ತು ಕೊಂಬು ಮೇಲೆ ಬರುತ್ತೆ ಅಥವಾ ರಾಜರು ಮೇಲೆ ಏಳ್ತಾರೆ (24)

  • 8

    • ಟಗರು ಮತ್ತು ಹೋತದ ದರ್ಶನ (1-14)

      • ಚಿಕ್ಕ ಕೊಂಬು ತನ್ನನ್ನೇ ಮೇಲಕ್ಕೆ ಏರಿಸ್ಕೊಳ್ಳುತ್ತೆ (9-12)

      • 2,300 ಸಾಯಂಕಾಲಗಳು, ಬೆಳಿಗ್ಗೆಗಳು ಕಳೆಯೋ ತನಕ (14)

    • ಗಬ್ರಿಯೇಲ ದರ್ಶನದ ಅರ್ಥ ಹೇಳ್ತಾನೆ (15-27)

      • ಟಗರು ಮತ್ತು ಹೋತ ಯಾರು ಅನ್ನೋ ವಿವರಣೆ (20, 21)

      • ಉಗ್ರ ಕೋಪ ಇರೋ ರಾಜ ಎದ್ದು ನಿಲ್ತಾನೆ (23-25)

  • 9

    • ದಾನಿಯೇಲನ ತಪ್ಪೊಪ್ಪಿಗೆಯ ಪ್ರಾರ್ಥನೆ (1-19)

      • 70 ವರ್ಷ ಹಾಳುಬೀಳುತ್ತೆ (2)

    • ಗಬ್ರಿಯೇಲ ದಾನಿಯೇಲನ ಹತ್ರ ಬಂದ (20-23)

    • 70 ವಾರಗಳ ಬಗ್ಗೆ ಭವಿಷ್ಯವಾಣಿ (24-27)

      • 69 ವಾರ ಆದ್ಮೇಲೆ ಮೆಸ್ಸೀಯನ ಆಗಮನ (25)

      • ಮೆಸ್ಸೀಯನನ್ನ ಕೊಲ್ತಾರೆ (26)

      • ಪಟ್ಟಣವನ್ನ, ಪವಿತ್ರಸ್ಥಳವನ್ನ ನಾಶಮಾಡ್ತಾರೆ (26)

  • 10

    • ದೇವರ ಒಬ್ಬ ಸಂದೇಶವಾಹಕ ದಾನಿಯೇಲನನ್ನ ಭೇಟಿಮಾಡಿದ (1-21)

      • ಮೀಕಾಯೇಲ ದೇವದೂತನಿಗೆ ಸಹಾಯ ಮಾಡಿದನು (13)

  • 11

    • ಪರ್ಶಿಯ ಮತ್ತು ಗ್ರೀಸಿನ ರಾಜರು (1-4)

    • ದಕ್ಷಿಣದ ಮತ್ತು ಉತ್ತರದ ರಾಜರು (5-45)

      • ತೆರಿಗೆ ವಸೂಲಿ ಮಾಡುವವನು ಏಳ್ತಾನೆ (20)

      • ಒಪ್ಪಂದದ ನಾಯಕನನ್ನ ಕೊಂದುಹಾಕಲಾಗುತ್ತೆ (22)

      • ಭದ್ರ ಕೋಟೆಗಳ ದೇವರಿಗೆ ಗೌರವ ಕೊಡಲಾಗುತ್ತೆ (38)

      • ದಕ್ಷಿಣದ ರಾಜ, ಉತ್ತರದ ರಾಜ ಮಧ್ಯ ತಳ್ಳಾಟ (40)

      • ಪೂರ್ವದಿಂದ, ಉತ್ತರದಿಂದ ನಿದ್ದೆ ಕೆಡಿಸೋ ವರದಿಗಳು (44)

  • 12

    • ‘ಅಂತ್ಯಕಾಲ’ ಮತ್ತು ಅದ್ರ ನಂತ್ರದ ಕಾಲ (1-13)

      • ಮೀಕಾಯೇಲ ಎದ್ದು ನಿಲ್ತಾನೆ (1)

      • ತಿಳುವಳಿಕೆ ಇರುವವರು ನಕ್ಷತ್ರಗಳ ತರ ಹೊಳಿತಾರೆ (3)

      • ನಿಜ ಜ್ಞಾನ ತುಂಬಿ ತುಳುಕುತ್ತೆ (4)

      • ದಾನಿಯೇಲ ತನ್ನ ಪಾಲಿಗಾಗಿ ಎದ್ದು ನಿಲ್ತಾನೆ (13)