ಮತ್ತಾಯ 3:1-17
3 ಆ ಕಾಲದಲ್ಲಿ, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ+ ಯೂದಾಯದ ಕಾಡಿಗೆ* ಬಂದು ಸಾರ್ತಿದ್ದ.+
2 “ಪಶ್ಚಾತ್ತಾಪಪಡಿ, ಯಾಕಂದ್ರೆ ಸ್ವರ್ಗದ ಆಳ್ವಿಕೆ ಹತ್ರ ಇದೆ”+ ಅಂತ ಹೇಳ್ತಾ ಇದ್ದ.
3 ಈ ಯೋಹಾನನಿಗೆ ಸೂಚಿಸಿ ಪ್ರವಾದಿ ಯೆಶಾಯ+ “ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಗೊಳಿಸಿ’”+ ಅಂತ ಹೇಳಿದ್ದ.
4 ಯೋಹಾನ ಒಂಟೆ ಕೂದಲಿನ ಬಟ್ಟೆ ಹಾಕ್ತಿದ್ದ, ಸೊಂಟಕ್ಕೆ ಚರ್ಮದ ಸೊಂಟಪಟ್ಟಿ ಕಟ್ಕೊಳ್ತಿದ್ದ.+ ಇವನ ಆಹಾರ ಮಿಡತೆ ಮತ್ತು ಕಾಡುಜೇನು.+
5 ಯೆರೂಸಲೇಮ್, ಯೂದಾಯ ಮತ್ತು ಯೋರ್ದನಿನ ಸುತ್ತಲಿರೋ ಎಲ್ಲ ಪ್ರದೇಶಗಳ ಜನ್ರು ಇವನ ಹತ್ರ ಹೋಗ್ತಿದ್ರು.+
6 ತಮ್ಮ ಪಾಪಗಳನ್ನ ಮುಚ್ಚುಮರೆ ಇಲ್ಲದೆ ಒಪ್ಕೊಂಡು ಯೋರ್ದನ್ ನದಿಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ತಿದ್ರು.*+
7 ತುಂಬ ಫರಿಸಾಯರು,* ಸದ್ದುಕಾಯರು*+ ದೀಕ್ಷಾಸ್ನಾನದ ಸ್ಥಳಕ್ಕೆ ಬರೋದನ್ನ ನೋಡಿ ಯೋಹಾನ ಅವ್ರಿಗೆ “ವಿಷಹಾವಿನ ಮರಿಗಳೇ,+ ಮುಂದೆ ಬರೋ ದೇವರ ಕೋಪದ ದಿನದಲ್ಲಿ ತಪ್ಪಿಸ್ಕೊಬಹುದು ಅಂತ ನಿಮಗೆ ಹೇಳಿದ್ದು ಯಾರು?+
8 ಮೊದ್ಲು ನೀವು ಪಶ್ಚಾತ್ತಾಪ ಪಟ್ಟಿದ್ದೀರ ಅಂತ ನಡತೆಯಲ್ಲಿ ತೋರಿಸಿ.
9 ‘ಅಬ್ರಹಾಮ ನಮ್ಮ ತಂದೆ’+ ಅಂತ ಮನಸ್ಸಲ್ಲೂ ಯೋಚಿಸಬೇಡಿ! ನಾನು ಹೇಳೋ ಮಾತು ಕೇಳಿ, ಈ ಕಲ್ಲುಗಳಿಂದ ಸಹ ದೇವರು ಅಬ್ರಹಾಮನಿಗೆ ಮಕ್ಕಳನ್ನ ಹುಟ್ಟಿಸೋಕೆ ಸಾಧ್ಯ!
10 ಮರಗಳನ್ನ ಬುಡ ಸಮೇತ ಕಡಿದುಹಾಕೋಕೆ ಈಗಾಗಲೇ ಕೊಡಲಿ ಸಿದ್ಧವಾಗಿದೆ. ಒಳ್ಳೇ ಫಲ ಕೊಡದ ಮರಗಳನ್ನೆಲ್ಲ ಕಡಿದು ಬೆಂಕಿಗೆ ಬಿಸಾಕ್ತಾರೆ.+
11 ನಾನು ನಿಮ್ಮ ಪಶ್ಚಾತ್ತಾಪ ನೋಡಿ ನೀರಲ್ಲಿ ದೀಕ್ಷಾಸ್ನಾನ ಮಾಡಿಸ್ತೀನಿ.+ ಆದ್ರೆ ನನ್ನ ನಂತ್ರ ಬರೋನು ನನಗಿಂತ ತುಂಬ ಬಲಶಾಲಿ. ಆತನ ಚಪ್ಪಲಿ ಬಿಚ್ಚೋಕೂ ನಂಗೆ ಯೋಗ್ಯತೆ ಇಲ್ಲ.+ ಆತನು ನಿಮಗೆ ಪವಿತ್ರಶಕ್ತಿ+ ಮತ್ತು ಬೆಂಕಿಯಿಂದ ದೀಕ್ಷಾಸ್ನಾನ ಮಾಡಿಸ್ತಾನೆ.+
12 ಆತನ ಕೈಯಲ್ಲಿ ಮೊರ ಇದೆ. ಆತನು ಧಾನ್ಯದ ರಾಶಿ ತೂರಿ ಕಣವನ್ನ ಪೂರ್ತಿ ಸ್ವಚ್ಛ ಮಾಡಿ ಗೋದಿನ ಕಣಜಕ್ಕೆ ತುಂಬ್ತಾನೆ. ಉಳಿದಿರೋ ಹೊಟ್ಟನ್ನ ಆರಿಸೋಕೆ ಆಗದ ಬೆಂಕಿಯಲ್ಲಿ+ ಹಾಕಿ ಸುಟ್ಟುಬಿಡ್ತಾನೆ” ಅಂದ.
13 ಆಮೇಲೆ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ಳೋಕೆ ಗಲಿಲಾಯದಿಂದ ಯೋರ್ದನ್ ನದಿ ಹತ್ರ ಬಂದ.+
14 ಆದ್ರೆ ಯೋಹಾನ ಆತನನ್ನ ತಡೆದು “ನಾನು ಬಂದು ನಿನ್ನ ಹತ್ರ ದೀಕ್ಷಾಸ್ನಾನ ಮಾಡಿಸ್ಕೊಳ್ಳಬೇಕು. ಅಂಥದ್ರಲ್ಲಿ ನೀನು ಯಾಕೆ ನನ್ನ ಹತ್ರ ಬಂದೆ?” ಅಂದ.
15 ಅದಕ್ಕೆ ಯೇಸು “ನನ್ನನ್ನ ತಡಿಬೇಡ, ಯಾಕಂದ್ರೆ ದೇವರ ದೃಷ್ಟಿಯಲ್ಲಿ ಸರಿ* ಆಗಿರೋದನ್ನೇ ನಾವು ಮಾಡಬೇಕು” ಅಂದ. ಆಗ ಯೋಹಾನ ಸುಮ್ಮನಾದ.
16 ಯೇಸು ದೀಕ್ಷಾಸ್ನಾನ ಪಡೆದು ನೀರಿಂದ ಮೇಲಕ್ಕೆ ಬಂದ ತಕ್ಷಣ ಆಕಾಶ ತೆರಿತು.+ ದೇವರ ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ಆತನ ಮೇಲೆ ಇಳಿದು ಬರೋದನ್ನ ಯೋಹಾನ ನೋಡಿದ.+
17 ಅಷ್ಟೇ ಅಲ್ಲ ಸ್ವರ್ಗದಿಂದ+ “ಇವನು ನನ್ನ ಪ್ರೀತಿಯ ಮಗ.+ ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ”+ ಅನ್ನೋ ಧ್ವನಿ ಕೇಳಿಸ್ತು.
ಪಾದಟಿಪ್ಪಣಿ
^ ಇದು ಜನವಾಸ ಕಡಿಮೆ ಇರೋ ಜಾಗ.
^ ಪರಿಶಿಷ್ಟ ಎ5 ನೋಡಿ.
^ ಅಥವಾ “ಅವನಿಂದ ಮುಳುಗಿಸ್ಕೊಳ್ತಿದ್ರು.”
^ ಒಂದನೇ ಶತಮಾನದಲ್ಲಿ ಹೆಸ್ರುವಾಸಿ ಆಗಿದ್ದ ಯೆಹೂದಿಗಳ ಒಂದು ಧಾರ್ಮಿಕ ಪಂಗಡ.
^ ಇವರು ಸಹ ಹೆಸ್ರುವಾಸಿಯಾಗಿದ್ದ ಯೆಹೂದಿಗಳ ಒಂದು ಧಾರ್ಮಿಕ ಪಂಗಡದವರು. ಪುರೋಹಿತರು ಇವ್ರಿಗೆ ಬೆಂಬಲಿಸ್ತಾ ಇದ್ರು. ಇವ್ರಿಗೆ ದೇವದೂತರ ಮೇಲಾಗಲಿ, ಮತ್ತೆ ಜೀವ ಬರೋದರ ಮೇಲಾಗಲಿ ನಂಬಿಕೆ ಇರ್ಲಿಲ್ಲ.
^ ಅಥವಾ “ನೀತಿ.”