ಯೆಹೆಜ್ಕೇಲ 19:1-14
-
ಇಸ್ರಾಯೇಲ್ಯರ ಪ್ರಧಾನರಿಗಾಗಿ ಶೋಕಗೀತೆ (1-14)
19 “ಇಸ್ರಾಯೇಲ್ಯರ ಪ್ರಧಾನರ ಬಗ್ಗೆ ನೀನು ಒಂದು ಶೋಕಗೀತೆ ಹಾಡಬೇಕು.
2 ನೀನು ಹೀಗೆ ಹೇಳು:
‘ನಿನ್ನ ಅಮ್ಮ ಸಿಂಹಗಳ ಮಧ್ಯ ಇರೋ ಸಿಂಹಿಣಿ ಆಗಿದ್ದಳು.
ಆ ಸಿಂಹಿಣಿ ಬಲಿಷ್ಠ ಸಿಂಹಗಳ ಮಧ್ಯ ಮಲಗ್ತಾ ಇತ್ತು, ಅಲ್ಲೇ ತನ್ನ ಮರಿಗಳನ್ನ ಬೆಳೆಸ್ತು.
3 ಅದು ಬೆಳೆಸಿದ ಮರಿಗಳಲ್ಲಿ ಒಂದು ಮರಿ ಬಲಿಷ್ಠ ಸಿಂಹ ಆಯ್ತು.+
ಬೇಟೆಯನ್ನ ಹಿಡಿದು ಸೀಳಿ ಹಾಕೋದು ಹೇಗೆ ಅಂತ ಕಲೀತು,ಮನುಷ್ಯರನ್ನೂ ತಿಂದು ಹಾಕ್ತು.
4 ಜನಾಂಗಗಳಿಗೆ ಅದ್ರ ಬಗ್ಗೆ ಗೊತ್ತಾದಾಗ ಅವರು ಗುಂಡಿ ತೋಡಿ ಅದನ್ನ ಹಿಡಿದ್ರು,ಕೊಂಡಿಗಳನ್ನ ಹಾಕಿ ಅದನ್ನ ಈಜಿಪ್ಪಿಗೆ ಹಿಡ್ಕೊಂಡು ಹೋದ್ರು.+
5 ಅದು ವಾಪಸ್ ಬರುತ್ತೆ ಅಂತ ಆ ಸಿಂಹಿಣಿ ಕಾಯ್ತಾ ಇತ್ತು, ಕೊನೆಗೆ ಅದು ಬರಲ್ಲ ಅಂತ ಸಿಂಹಿಣಿಗೆ ಗೊತ್ತಾಯ್ತು.
ಹಾಗಾಗಿ ತನ್ನ ಇನ್ನೊಂದು ಮರಿನ ಬೆಳಿಸಿ ಅದನ್ನ ಬಲಿಷ್ಠ ಸಿಂಹವಾಗಿ ಮಾಡಿ ಕಳಿಸ್ತು.
6 ಅಷ್ಟೇ ಅಲ್ಲ ಆ ಸಿಂಹ ಬೇರೆ ಸಿಂಹಗಳ ಮಧ್ಯ ತಿರುಗಾಡ್ತಾ ಬಲಿಷ್ಠ ಸಿಂಹ ಆಯ್ತು.
ಬೇಟೆಯನ್ನ ಹಿಡಿದು ಸೀಳಿಹಾಕೋದು ಹೇಗೆ ಅಂತ ಅದು ಕಲೀತು, ಮನುಷ್ಯರನ್ನೂ ತಿಂದುಹಾಕ್ತು.+
7 ಅದು ಅವ್ರ ಭದ್ರ ಕೋಟೆಗಳ ಒಳಗೆ ತಿರುಗ್ತಾ ಅವ್ರ ಪಟ್ಟಣಗಳನ್ನ ಹಾಳುಮಾಡ್ತು,ಹಾಗಾಗಿ ಖಾಲಿಖಾಲಿ ಹೊಡೀತಿದ್ದ ದೇಶದಲ್ಲೆಲ್ಲ ಅದ್ರ ಗರ್ಜನೆನೇ ಕೇಳಿಸ್ತಿತ್ತು.+
8 ಸುತ್ತಮುತ್ತ ಇರೋ ಪ್ರದೇಶದಲ್ಲಿದ್ದ ಜನ್ರು ಅದನ್ನ ಹಿಡಿಯೋಕೆ ಬಲೆ ಬೀಸಿದ್ರು,ಅವರು ತೋಡಿದ ಗುಂಡಿಗೆ ಅದು ಬಿತ್ತು.
9 ಅವರು ಅದಕ್ಕೆ ಕೊಂಡಿಗಳನ್ನ ಸಿಕ್ಕಿಸಿ ಪಂಜರದಲ್ಲಿ ಹಾಕಿ ಬಾಬೆಲಿನ ರಾಜನ ಹತ್ರ ಕರ್ಕೊಂಡು ಹೋದ್ರು.
ಇನ್ಮುಂದೆ ಅದ್ರ ಗರ್ಜನೆ ಇಸ್ರಾಯೇಲಿನ ಬೆಟ್ಟಗಳ ಮೇಲೆ ಕೇಳಿಸದ ಹಾಗೆ ಮಾಡೋಕೆ ಅವರು ಅದನ್ನ ಬಂಧಿಸಿ ಇಟ್ರು.
10 ನಿನ್ನ ಅಮ್ಮ ನೀರಿನ ಪಕ್ಕದಲ್ಲಿ ನೆಟ್ಟ ದ್ರಾಕ್ಷಿಬಳ್ಳಿ* ತರ ಇದ್ದಳು.+
ಅದ್ರ ಪಕ್ಕದಲ್ಲಿ ತುಂಬ ನೀರು ಇದ್ದಿದ್ರಿಂದ ಅದು ಹಣ್ಣು ಕೊಡ್ತು ಮತ್ತು ಅದಕ್ಕೆ ತುಂಬ ಕೊಂಬೆಗಳು ಬೆಳೆದ್ವು.
11 ಅದ್ರ ಕೊಂಬೆಗಳು ರಾಜದಂಡಗಳನ್ನ ಮಾಡುವಷ್ಟು ಗಟ್ಟಿಮುಟ್ಟಾಗಿ ಬೆಳೆದ್ವು.
ಅದು ಬೇರೆ ಮರಗಳಿಗಿಂತ ಎತ್ತರಕ್ಕೆ ಬೆಳೀತು,ಅದೆಷ್ಟು ಎತ್ತರವಾಗಿ ಮತ್ತು ದಟ್ಟವಾಗಿ ಬೆಳೀತು ಅಂದ್ರೆ ದೂರದಿಂದಾನೂ ಅದು ಕಾಣ್ತಿತ್ತು.
12 ಆದ್ರೆ ಅದ್ರ ಮೇಲೆ ದೇವರಿಗೆ ಕೋಪ ಬಂದಿದ್ರಿಂದ ಆತನು ಅದನ್ನ ಬೇರು ಸಮೇತ ಕಿತ್ತು+ ನೆಲಕ್ಕೆ ಬಿಸಾಡಿದನು,ಪೂರ್ವದ ಗಾಳಿ ಬೀಸಿದಾಗ ಅದ್ರ ಹಣ್ಣುಗಳು ಒಣಗಿಹೋದ್ವು.
ಅದ್ರ ಗಟ್ಟಿಮುಟ್ಟಾದ ಕೊಂಬೆಗಳು ಮುರಿದು ಹೋದ್ವು, ಆಮೇಲೆ ಅವು ಒಣಗಿಹೋಗಿ+ ಬೆಂಕಿಯಲ್ಲಿ ಬೂದಿಯಾದ್ವು.+
13 ಈಗ ಆ ದ್ರಾಕ್ಷಿಬಳ್ಳಿಯನ್ನ ಕಾಡಲ್ಲಿ,ನೀರಿಲ್ಲದ ಒಣ ಪ್ರದೇಶದಲ್ಲಿ ನೆಟ್ರು.+
14 ಅದ್ರ ಕೊಂಬೆಗಳಿಂದ ಬೆಂಕಿ ಹರಡಿ ಅದ್ರ ಚಿಗುರುಗಳನ್ನೂ ಹಣ್ಣುಗಳನ್ನೂ ಸುಟ್ಟುಬಿಡ್ತು,ಅದ್ರಲ್ಲಿ ಒಂದೇ ಒಂದು ಗಟ್ಟಿಯಾದ ಕೊಂಬೆನೂ ಉಳಿಲಿಲ್ಲ, ಆಳ್ವಿಕೆ ಮಾಡೋಕೆ ಒಂದು ರಾಜದಂಡನೂ ಇಲ್ಲದ ಹಾಗಾಯ್ತು.+
“‘ಇದು ಒಂದು ಶೋಕಗೀತೆ, ಇದು ಶೋಕಗೀತೆಯಾಗೇ ಇರುತ್ತೆ.’”
ಪಾದಟಿಪ್ಪಣಿ
^ ಅಕ್ಷ. “ನಿನ್ನ ರಕ್ತದಲ್ಲಿರೋ ದ್ರಾಕ್ಷಿಬಳ್ಳಿ.”