ಲೂಕ 3:1-38

  • ಯೋಹಾನ ಸೇವೆ ಆರಂಭಿಸಿದ (1, 2)

  • ದೀಕ್ಷಾಸ್ನಾನ ಮಾಡಿಸ್ಕೊಳ್ಳಿ ಅಂತ ಯೋಹಾನ ಸಾರಿಹೇಳಿದ (3-20)

  • ಯೇಸುವಿನ ದೀಕ್ಷಾಸ್ನಾನ (21, 22)

  • ಯೇಸುವಿನ ವಂಶಾವಳಿ (23-38)

3  ಚಕ್ರವರ್ತಿ ತಿಬೇರಿಯನ ಆಳ್ವಿಕೆಯ 15ನೇ ವರ್ಷದಲ್ಲಿ ಪೊಂತ್ಯ ಪಿಲಾತ ಯೂದಾಯದ ರಾಜ್ಯಪಾಲನಾಗಿದ್ದ. ಹೆರೋದ*+ ಗಲಿಲಾಯದ ಅಧಿಪತಿಯಾಗಿದ್ದ. ಹೆರೋದನ ತಮ್ಮ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಪ್ರದೇಶಗಳ ಅಧಿಪತಿಯಾಗಿದ್ದ. ಲುಸನ್ಯನು ಅಬಿಲೇನೆಯ ಅಧಿಪತಿಯಾಗಿದ್ದ.  ಅನ್ನ, ಕಾಯಫ+ ಮುಖ್ಯ ಪುರೋಹಿತರಾಗಿದ್ರು. ಆ ಸಮಯದಲ್ಲಿ ಅರಣ್ಯದಲ್ಲಿದ್ದ ಜಕರೀಯನ ಮಗ ಯೋಹಾನನಿಗೆ+ ದೇವರು ಒಂದು ಸಂದೇಶ ಹೇಳಿದನು.+  ಹಾಗಾಗಿ ಯೋಹಾನ ಯೋರ್ದನ್‌ ನದಿ ಸುತ್ತಲಿದ್ದ ಎಲ್ಲ ಪ್ರದೇಶಗಳಿಗೆ ಹೋಗಿ ಜನ್ರಿಗೆ “ದೀಕ್ಷಾಸ್ನಾನ ಮಾಡಿಸ್ಕೊಂಡು ಪಶ್ಚಾತ್ತಾಪ ಪಟ್ಟಿದ್ದೀರ ಅಂತ ತೋರಿಸಿ. ಆಗ ದೇವರು ನಿಮ್ಮ ಪಾಪಗಳನ್ನ ಕ್ಷಮಿಸ್ತಾನೆ”+ ಅಂತ ಹೇಳ್ತಿದ್ದ.  ಪ್ರವಾದಿ ಯೆಶಾಯನ ಗ್ರಂಥದಲ್ಲಿ ಹೀಗೆ ಬರೆದಿದೆ “ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಗೊಳಿಸಿ.+  ಎಲ್ಲ ಕಣಿವೆ ಮುಚ್ಚಿ. ಎಲ್ಲ ಪರ್ವತ, ಬೆಟ್ಟವನ್ನ ಸಮತಟ್ಟಾಗಿ ಮಾಡಿ. ಸೊಟ್ಟಗಿರೋ ದಾರಿಗಳನ್ನ ನೆಟ್ಟಗೆ ಮಾಡಿ. ಒರಟಾಗಿರೋ ದಾರಿಗಳನ್ನ ನುಣ್ಣಗೆ ಮಾಡಿ.  ಮನುಷ್ಯರೆಲ್ಲ ದೇವರು ಕೊಡೋ ರಕ್ಷಣೆ ನೋಡ್ತಾರೆ.’”+  ದೀಕ್ಷಾಸ್ನಾನ ಮಾಡಿಸ್ಕೊಳ್ಳೋಕೆ ಬರ್ತಿದ್ದ ಜನ್ರಿಗೆ ಯೋಹಾನ “ವಿಷಹಾವಿನ ಮರಿಗಳೇ, ಮುಂದೆ ಬರೋ ದೇವರ ಕೋಪದ ದಿನದಲ್ಲಿ ತಪ್ಪಿಸ್ಕೊಳ್ಳಬಹುದು ಅಂತ ನೆನಸಿದ್ದೀರಾ?+  ಮೊದಲು ಪಶ್ಚಾತ್ತಾಪ ಪಟ್ಟಿದ್ದೀರ ಅಂತ ನಡತೆಯಲ್ಲಿ ತೋರಿಸಿ. ‘ಅಬ್ರಹಾಮ ನಮ್ಮ ತಂದೆ’ ಅಂತ ಮನಸ್ಸಲ್ಲೂ ಯೋಚಿಸಬೇಡಿ! ನಾನು ಹೇಳೋ ಮಾತು ಕೇಳಿ, ಈ ಕಲ್ಲುಗಳಿಂದ ಸಹ ದೇವರು ಅಬ್ರಹಾಮನಿಗೆ ಮಕ್ಕಳನ್ನ ಹುಟ್ಟಿಸೋಕೆ ಸಾಧ್ಯ!  ಮರಗಳನ್ನ ಬುಡ ಸಮೇತ ಕಡಿಯೋಕೆ ಕೊಡಲಿ ಸಿದ್ಧವಾಗಿದೆ. ಒಳ್ಳೇ ಫಲ ಕೊಡದ ಮರಗಳನ್ನೆಲ್ಲ ಕಡಿದು ಬೆಂಕಿಗೆ ಬಿಸಾಕ್ತಾರೆ” ಅಂತಿದ್ದ.+ 10  ಆಗ ಜನ “ಹಾಗಾದ್ರೆ ನಾವೇನು ಮಾಡಬೇಕು?” ಅಂತ ಕೇಳ್ತಿದ್ರು. 11  ಅದಕ್ಕೆ “ನಿಮ್ಮತ್ರ ಎರಡು ಬಟ್ಟೆ* ಇದ್ರೆ ಬಟ್ಟೆ ಇಲ್ಲದವ್ರಿಗೆ ಒಂದನ್ನ ಕೊಡಿ. ತಿನ್ನೋಕೆ ಏನಾದ್ರೂ ಇದ್ರೆ ಅದನ್ನ ಹಂಚ್ಕೊಂಡು ತಿನ್ನಿ”+ ಅಂತಿದ್ದ. 12  ತೆರಿಗೆ ವಸೂಲಿ ಮಾಡುವವರು ಸಹ ದೀಕ್ಷಾಸ್ನಾನ ಮಾಡಿಸ್ಕೊಳ್ಳೋಕೆ ಅವನ ಹತ್ರ ಬರ್ತಿದ್ರು.+ ಅವರು “ಗುರು, ನಾವೇನು ಮಾಡಬೇಕು?” ಅಂತ ಕೇಳ್ತಿದ್ರು. 13  ಆಗ ಅವನು “ಹೆಚ್ಚು ತೆರಿಗೆ ವಸೂಲಿ ಮಾಡಬೇಡಿ”+ ಅಂತಿದ್ದನು. 14  ಸೈನಿಕರು ಸಹ “ನಾವೇನು ಮಾಡಬೇಕು?” ಅಂತ ಕೇಳ್ತಿದ್ರು. ಅದಕ್ಕೆ ಅವನು “ಯಾರಿಗೂ ಕಿರುಕುಳ ಕೊಡಬೇಡಿ. ಯಾರ ಮೇಲೂ ಸುಳ್ಳಾರೋಪ ಹಾಕಬೇಡಿ.+ ಸಿಗೋದರಲ್ಲಿ* ತೃಪ್ತರಾಗಿ” ಅಂತಿದ್ದನು. 15  ಆ ಸಮಯದಲ್ಲಿ ಜನ ಕ್ರಿಸ್ತನಿಗಾಗಿ ಕಾಯ್ತಾ ಇದ್ರು. ಹಾಗಾಗಿ ಯೋಹಾನನ ಬಗ್ಗೆ ಮನಸ್ಸಲ್ಲಿ “ಕ್ರಿಸ್ತ ಇವನೇನಾ?”+ ಅಂದ್ಕೊಳ್ತಿದ್ರು. 16  ಆಗ ಯೋಹಾನ “ನಾನು ನಿಮಗೆ ನೀರಲ್ಲಿ ದೀಕ್ಷಾಸ್ನಾನ ಮಾಡಿಸ್ತೀನಿ. ಆದ್ರೆ ನನ್ನ ನಂತ್ರ ಬರೋನು ನನಗಿಂತ ಹೆಚ್ಚು ಬಲಶಾಲಿ. ಆತನ ಚಪ್ಪಲಿ ಬಿಚ್ಚಕ್ಕೂ ನಂಗೆ ಯೋಗ್ಯತೆ ಇಲ್ಲ.+ ಆತನು ನಿಮಗೆ ಪವಿತ್ರಶಕ್ತಿ ಮತ್ತು ಬೆಂಕಿಯಿಂದ ದೀಕ್ಷಾಸ್ನಾನ ಮಾಡಿಸ್ತಾನೆ.+ 17  ಆತನ ಕೈಯಲ್ಲಿ ಮೊರ ಇದೆ. ಧಾನ್ಯದ ರಾಶಿ ತೂರಿ ಕಣವನ್ನ ಪೂರ್ತಿ ಸ್ವಚ್ಛಮಾಡಿ ಗೋದಿಯನ್ನ ಕಣಜಕ್ಕೆ ತುಂಬ್ತಾನೆ. ಉಳಿದಿರೋ ಹೊಟ್ಟನ್ನ ಆರಿಸೋಕೆ ಆಗದ ಬೆಂಕಿಯಲ್ಲಿ ಹಾಕಿ ಸುಟ್ಟುಬಿಡ್ತಾನೆ” ಅಂದ. 18  ಯೋಹಾನ ಇನ್ನೂ ತುಂಬ ವಿಷ್ಯ ಹೇಳಿ ಜನ್ರನ್ನ ಪ್ರೋತ್ಸಾಹಿಸಿದ. ಸಿಹಿಸುದ್ದಿ ಸಾರ್ತಿದ್ದ. 19  ಅಧಿಪತಿ ಹೆರೋದ ತನ್ನ ಅಣ್ಣನ ಹೆಂಡತಿ ಹೆರೋದ್ಯಳನ್ನ ಮದುವೆ ಆಗಿರೋದು, ಕೆಟ್ಟ ಕೆಲಸಗಳನ್ನ ಮಾಡಿರೋದು ತಪ್ಪು ಅಂತ ಯೋಹಾನ ಹೇಳಿದ. 20  ಅದಕ್ಕೆ ಅವನನ್ನ ಹಿಡಿದು ಜೈಲಿಗೆ ಹಾಕಿದ. ಹೀಗೆ ಹೆರೋದನ ಕೆಟ್ಟ ಕೆಲಸಗಳ ಪಟ್ಟಿಗೆ ಇನ್ನೊಂದು ಸೇರಿತು.+ 21  ಜನ್ರೆಲ್ಲ ದೀಕ್ಷಾಸ್ನಾನ ಮಾಡಿಸ್ಕೊಂಡ್ರು. ಯೇಸು ಸಹ ದೀಕ್ಷಾಸ್ನಾನ ಮಾಡಿಸ್ಕೊಂಡನು.+ ಆತನು ಪ್ರಾರ್ಥನೆ ಮಾಡ್ತಿದ್ದಾಗ ಆಕಾಶ ತೆರಿತು.+ 22  ಅಷ್ಟೇ ಅಲ್ಲ ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ಇಳಿದು ಆತನ ಮೇಲೆ ಬಂತು. ಸ್ವರ್ಗದಿಂದ ಒಂದು ಧ್ವನಿ “ನೀನು ನನ್ನ ಪ್ರೀತಿಯ ಮಗ. ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ”+ ಅಂತ ಹೇಳಿತು. 23  ಯೇಸುಗೆ+ ಸುಮಾರು 30 ವರ್ಷ ಆದಾಗ ಸೇವೆ ಶುರುಮಾಡಿದನು.+ ಜನ್ರ ಪ್ರಕಾರ,ಯೇಸು ಯೋಸೇಫನ+ ಮಗ. ಯೋಸೇಫ ಹೇಲೀಯ ಮಗ. 24  ಹೇಲೀ ಮತ್ಥಾತನ ಮಗ. ಮತ್ಥಾತ ಲೇವಿಯ ಮಗ. ಲೇವಿ ಮೆಲ್ಖಿಯ ಮಗ. ಮೆಲ್ಖಿ ಯನ್ನಾಯನ ಮಗ. ಯನ್ನಾಯ ಯೋಸೇಫನ ಮಗ. 25  ಯೋಸೇಫ ಮತ್ತಥೀಯನ ಮಗ. ಮತ್ತಥೀಯ ಆಮೋಸನ ಮಗ. ಆಮೋಸ ನಹೂಮನ ಮಗ. ನಹೂಮ ಎಸ್ಲಿಯ ಮಗ. ಎಸ್ಲಿ ನಗ್ಗಾಯನ ಮಗ. 26  ನಗ್ಗಾಯ ಮಹಾಥನ ಮಗ. ಮಹಾಥ ಮತ್ತಥೀಯನ ಮಗ. ಮತ್ತಥೀಯ ಶಿಮೀಯನನ ಮಗ. ಶಿಮೀಯನ್‌ ಯೋಸೇಖನ ಮಗ. ಯೋಸೇಖ ಯೋದನ ಮಗ. 27  ಯೋದ ಯೊಹನಾನನ ಮಗ. ಯೊಹನಾನ ರೇಸನ ಮಗ. ರೇಸ ಜೆರುಬ್ಬಾಬೆಲನ ಮಗ.+ ಜೆರುಬ್ಬಾಬೆಲ ಶೆಯಲ್ತಿಯೇಲನ ಮಗ.+ ಶೆಯಲ್ತಿಯೇಲ ನೇರಿಯ ಮಗ. 28  ನೇರಿ ಮೆಲ್ಖಿಯ ಮಗ. ಮೆಲ್ಖಿ ಅದ್ದಿಯ ಮಗ. ಅದ್ದಿ ಕೋಸಾಮನ ಮಗ. ಕೋಸಾಮ ಎಲ್ಮದಾಮನ ಮಗ. ಎಲ್ಮದಾಮ ಏರನ ಮಗ. 29  ಏರ ಯೆಹೋಷುವನ ಮಗ. ಯೆಹೋಷುವ ಎಲಿಯೇಜರನ ಮಗ. ಎಲಿಯೇಜರ ಯೋರೈಮನ ಮಗ. ಯೋರೈಮ ಮತ್ಥಾತನ ಮಗ. ಮತ್ಥಾತ ಲೇವಿಯ ಮಗ. 30  ಲೇವಿ ಸಿಮಿಯೋನನ ಮಗ. ಸಿಮಿಯೋನ ಯೂದನ ಮಗ. ಯೂದ ಯೋಸೇಫನ ಮಗ. ಯೋಸೇಫ ಯೋನಾಮನ ಮಗ. ಯೋನಾಮ ಎಲ್ಯಕೀಮನ ಮಗ. 31  ಎಲ್ಯಕೀಮ ಮೆಲೆಯಾನ ಮಗ. ಮೆಲೆಯಾ ಮೆನ್ನನ ಮಗ. ಮೆನ್ನ ಮತ್ತಾಥನ ಮಗ. ಮತ್ತಾಥ ನಾತಾನನ ಮಗ.+ ನಾತಾನ ದಾವೀದನ ಮಗ.+ 32  ದಾವೀದ ಇಷಯನ ಮಗ.+ ಇಷಯ ಓಬೇದನ ಮಗ.+ ಓಬೇದ ಬೋವಜನ ಮಗ.+ ಬೋವಜ ಸಲ್ಮೋನನ ಮಗ.+ ಸಲ್ಮೋನ ನಹಶೋನನ ಮಗ.+ 33  ನಹಶೋನ ಅಮ್ಮೀನಾದಾಬನ ಮಗ. ಅಮ್ಮೀನಾದಾಬ ಆರ್ನೈಯನ ಮಗ. ಆರ್ನೈಯ ಹೆಚ್ರೋನನ ಮಗ. ಹೆಚ್ರೋನ ಪೆರೆಚನ ಮಗ.+ ಪೆರೆಚ ಯೆಹೂದನ ಮಗ.+ 34  ಯೆಹೂದ ಯಾಕೋಬನ ಮಗ.+ ಯಾಕೋಬ ಇಸಾಕನ ಮಗ.+ ಇಸಾಕ ಅಬ್ರಹಾಮನ ಮಗ.+ ಅಬ್ರಹಾಮ ತೆರಹನ ಮಗ.+ ತೆರಹ ನಾಹೋರನ ಮಗ.+ 35  ನಾಹೋರ ಸೆರೂಗನ ಮಗ.+ ಸೆರೂಗ ರೆಗೂನ ಮಗ.+ ರೆಗೂ ಪೆಲೆಗನ ಮಗ.+ ಪೆಲೆಗ ಎಬೆರನ ಮಗ.+ ಎಬೆರ ಷೀಲಾನ ಮಗ.+ 36  ಷೀಲಾ ಕಯಿನಾನನ ಮಗ. ಕಯಿನಾನ ಅರ್ಪಕ್ಷಾದನ ಮಗ.+ ಅರ್ಪಕ್ಷಾದ ಶೇಮನ ಮಗ.+ ಶೇಮ ನೋಹನ ಮಗ.+ ನೋಹ ಲೆಮೆಕನ ಮಗ.+ 37  ಲೆಮೆಕ ಮೆತೂಷೆಲಹನ ಮಗ.+ ಮೆತೂಷೆಲಹ ಹನೋಕನ ಮಗ. ಹನೋಕ ಯೆರೆದನ ಮಗ.+ ಯೆರೆದ ಮಹಲಲೇಲನ ಮಗ.+ ಮಹಲಲೇಲ ಕೇನಾನನ ಮಗ.+ 38  ಕೇನಾನ ಎನೋಷನ ಮಗ.+ ಎನೋಷ ಸೇತನ ಮಗ.+ ಸೇತ ಆದಾಮನ ಮಗ.+ ಆದಾಮ ದೇವರ ಮಗ.

ಪಾದಟಿಪ್ಪಣಿ

ಅಂದ್ರೆ, ಹೆರೋದ ಅಂತಿಪ. ಪದವಿವರಣೆ ನೋಡಿ.
ಅಥವಾ “ಇನ್ನೊಂದು ಜೊತೆ ಬಟ್ಟೆ.”
ಅಥವಾ “ಸಿಗೋ ಸಂಬಳದಲ್ಲಿ.”